Karnataka Media Academy Awards 2014

2
134

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀ ಎಂ.ಎ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2014ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು 2015 ಏಪ್ರಿಲ್ 16 ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.
ದಿನಾಂಕ: 2-3-2015 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ 2014ನೇ ಸಾಲಿಗೆ 34 ಪತ್ರಕರ್ತರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ಜೀವಮಾನದ ಸಾಧನೆಗಾಗಿ ಒಬ್ಬರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2014ನೇ ಸಾಲಿಗೆ ಕೋಲಾರ ಮೂಲದವರಾದ ಹಿರಿಯ ಪತ್ರಕರ್ತರಾದ ಶ್ರೀ ಎಂ.ಎಸ್. ಪ್ರಭಾಕರ ಅವರು ಸುಮಾರು 30 ವರ್ಷದ ದಿ ಹಿಂದು ಪತ್ರಿಕೆಯ ದಕ್ಷಿಣ ಆಫ್ರಿಕಾದ ವಿಶೇಷ ಪ್ರತಿನಿಧಿಯಾಗಿ ಹಾಗೂ ಅಸ್ಸಾಂ ರಾಜ್ಯದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಾಮರೂಪಿ ಎಂಬ ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಖ್ಯಾತರಾಗಿದ್ದಾರೆ. ಅವರನ್ನು ವಾರ್ಷಿಕವಾಗಿ ನೀಡಲಾಗುವ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
2014ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ, ಸಾಮಾಜಿಕ ಸಮಸ್ಯೆ  ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ, ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಜೊತೆಗೆ ತಲಾ 10 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ನೆರವೇರಿಸಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಮೂಲ ಸೌಲಭ್ಯ ಅಭಿವೃದ್ಧಿ, ಹಜ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾದ ಶ್ರೀ ಆರ್. ರೋಷನ್ ಬೇಗ್, ಸಾರಿಗೆ ಮತ್ತು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಹೆಚ್.ಆಂಜನೇಯ, ವಿರೋದ ಪಕ್ಷದ ನಾಯಕ ಶ್ರೀ ಜಗದೀಶ್ ಶೆಟ್ಟರ್, ಸಂಸದರಾದ ಶ್ರೀ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯರಾದ  ಶ್ರೀ ಎಚ್.ಎಂ. ರೇವಣ್ಣ , ಶ್ರೀ ಗೋವಿಂದರಾಜು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ. ನಾಗಾಂಬಿಕಾ ದೇವಿ ಹಾಗೂ ಇತರೆ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಂ.ಎ. ಪೊನ್ನಪ್ಪ ತಿಳಿಸಿದ್ದಾರೆ.
Venue Banquet Hall, Vidhana Soudha, Bengaluru
Date Thursday, April 16, 2015
Time 6:00pm to 9:00pm
Details
ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೆಳಕಂಡಂತಿದೆ:
2014ನೇ ಸಾಲಿನ ವಿಶೇಷ ಪ್ರಶಸ್ತಿ
ಶ್ರೀ ಎಂ.ಎಸ್. ಪ್ರಭಾಕರ್ (ಕಾಮರೂಪಿ)- (ಕೋಲಾರ)
2014ನೇ ಸಾಲಿನ ವಾರ್ಷಿಕ ಪ್ರಶಸ್ತಿ
1. ಶ್ರೀ ಕೋಟಿಗಾನಹಳ್ಳಿ ರಾಮಯ್ಯ  (ಕೋಲಾರ)
2. ಶ್ರೀ ಎಂ.ಕೆ. ಭಾಸ್ಕರರಾವ್  (ಶಿವಮೊಗ್ಗ)
3. ಶ್ರೀ ಎಂ. ನಾಗರಾಜ  (ಮೈಸೂರು)
4. ಶ್ರೀ ಕೆ.ಬಿ. ರಾಮಪ್ಪ  (ಶಿವಮೊಗ್ಗ)
5. ಶ್ರೀ ಬಿ. ಹೊನ್ನಪ್ಪ ಭಾವಿಕೇರಿ  (ಅಂಕೋಲ-ಉ.ಕ)
6. ಶ್ರೀಮತಿ ಗಾಯತ್ರಿ ನಿವಾಸ್  (ಮಂಗಳೂರು)
7. ಶ್ರೀಮತಿ ಲೀಲಾವತಿ  (ಹಾಸನ)
8. ಶ್ರೀ ಲಿಂಗೇನಹಳ್ಳಿ ಸುರೇಶ್ಚಂದ್ರ  (ಬೆಂಗಳೂರು)
9. ಶ್ರೀ ಇಫ್ತಿಕಾರ್ ಅಹಮದ್ ಶರೀಫ್  (ಬೆಂಗಳೂರು)
10. ಶ್ರೀ ವೀರೇಂದ್ರ ಶೀಲವಂತ  (ಬಾಗಲಕೋಟೆ)
11. ಶ್ರೀ ರಿಜ್ವಾನ್ ಉಲ್ಲಾ ಖಾನ್  (ಬೆಂಗಳೂರು)
12. ಶ್ರೀ ಬಿ.ಎಸ್. ಪ್ರಭುರಾಜನ್  (ಮೈಸೂರು)
13. ಶ್ರೀ ಎಸ್. ನಾಗೇಂದ್ರ (ನೇತ್ರರಾಜು)  (ಮೈಸೂರು)
14. ಶ್ರೀ ದೇವೇಂದ್ರಪ್ಪ ಹೆಚ್. ಕಪನೂರಕರ್  (ಕಲಬುರ್ಗಿ)
15. ಶ್ರೀ ಬಿ.ವಿ. ಗೋಪಿನಾಥ್  (ಕೋಲಾರ)
16. ಶ್ರೀ ರೋನ್ಸ್ ಬಂಟ್ವಾಳ್  (ಮುಂಬೈ) – ಹೊರನಾಡ ಕನ್ನಡಿಗರು
17. ಶ್ರೀ ಗಂಧರ್ವ ಸೇನಾ  (ಬೀದರ್)
18. ಶ್ರೀ ಶಿವಕುಮಾರ ಅಡಿವೆಪ್ಪ ಭೋಜಶೆಟ್ಟರ  (ಧಾರವಾಡ)
19. ಶ್ರೀ ಶಿವಾನಂದ ತಗಡೂರು  (ಹಾಸನ)
20. ಶ್ರೀ ವಿ. ನಂಜುಂಡಪ್ಪ  (ಬೆಂಗಳೂರು)
21. ಶ್ರೀ ಎಚ್.ಟಿ. ಅನಿಲ್  (ಕೊಡಗು)
22. ಶ್ರೀ ಆಸ್ಟ್ರೋಮೋಹನ್  (ಉಡುಪಿ)
23. ಶ್ರೀ ಬಸವರಾಜ ಹೊಂಗಲ್  (ಧಾರವಾಡ)
24. ಶ್ರೀ ಸಿ.ಎನ್. ರಾಜು (ಮಣ್ಣೆರಾಜು)  (ತುಮಕೂರು)
25. ಶ್ರೀಮತಿ ನಾಗಲಕ್ಷ್ಮೀ ಬಾಯಿ  (ದಾವಣಗೆರೆ)
26. ಶ್ರೀ ವಿನಾಯಕ ಗಂಗೊಳ್ಳಿ  (ಉಡುಪಿ)
27. ಶ್ರೀ ಎನ್. ರವಿಕುಮಾರ್  (ಶಿವಮೊಗ್ಗ)
28. ಶ್ರೀ ವಿಲಾಸ್ ಮೇಲಗಿರಿ  (ಹಾವೇರಿ)
29. ಶ್ರೀ ಮಂಜುನಾಥ ಎಂ. ಅದ್ದೆ – (ಬೆಂಗಳೂರು)
30. ಶ್ರೀ ಲೈಕ್ ಎ. ಖಾನ್  (ಮೈಸೂರು)
31. ಶ್ರೀಮತಿ ರಕ್ಷಾ ಕಟ್ಟೆಬೆಳಗುಳಿ – (ಹಾಸನ)
 32. ಶ್ರೀ ಎಸ್. ಲಕ್ಷ್ಮೀನಾರಾಯಣ  (ಕೋಲಾರ)
33. ಶ್ರೀ ಸಾಹುಕಾರ್ ಚಂದ್ರಶೇಖರ್ ರಾವ್ (ಸಾಚ)  (ಚಿಕ್ಕಮಗಳೂರು)
34. ಶ್ರೀ ಬಂಗ್ಲೆ ಮಲ್ಲಿಕಾರ್ಜುನ  (ಬಳ್ಳಾರಿ)
ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ
2014ನೇ ಸಾಲಿನ ಆಂದೋಲನ ಪ್ರಶಸ್ತಿ: ರಾಯಚೂರು ವಾಣಿ ಪತ್ರಿಕೆ, ರಾಯಚೂರು
ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ
2014 ನೇ ಸಾಲಿನ ಅಭಿಮಾನಿ ಪ್ರಶಸ್ತಿ : ಶ್ರೀ ಸಿದ್ಧಲಿಂಗಸ್ವಾಮಿ-ವಿಜಯ ಕರ್ನಾಟಕ,
ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ
ಶೀರ್ಷಿಕೆ: ಕುಣಿಗಲ್ ತಾಲ್ಲೂಕು ಗೊಲ್ಲರ ಹಟ್ಟಿಯ
  ಮಹಿಳೆಯರಿಗೆ ಹೆರಿಗೆ, ಋತುಸ್ರಾವ ಎಂದರೆ ಶಿಕ್ಷೆ
ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿ
2014ನೇ ಸಾಲಿನ ಮೈಸೂರು ದಿಗಂತ ಪ್ರಶಸ್ತಿ:  ಶ್ರೀಧರ, ಮಂಗಳೂರು-
ಲೋಕಧ್ವನಿ ದಿನಪತ್ರಿಕೆ, ಶಿರಸಿ, (ಉತ್ತರಕನ್ನಡ)
ಶೀರ್ಷಿಕೆ: ತನುವ ತೆಯ್ದು ಸುಗಂಧ ಹಂಚುವ ಕರ್ಮಪಥಿಕ

 

Contact  (ಎಸ್. ಶಂಕರಪ್ಪ)

ಕಾರ್ಯದರ್ಶಿ
ಕರ್ನಾಟಕ ಮಾಧ್ಯಮ ಅಕಾಡೆಮಿ
Entry FREE

2 COMMENTS

  1. I am proud of my Father Shri. Shivakumar Bhojashettar (Senior Journalist) who got felicitated with the prestigious “Karnataka Media Academy Award” on April 16th 2015 at Vidhana Soudha, Bangalore, Karnataka.

    Thanks for making the live streaming video available at http://www.enarada.com it was really helpful for many of my friends and relatives to watch the program live.

    Regards,
    Prasanna Shivakumar Bhojashettar

LEAVE A REPLY

Please enter your comment!
Please enter your name here

*

code